ಅಕ್ಷರ ಗಾತ್ರ

ನಂದಿನಿ ಮೊಸರಿನ ಬೆಲೆ ಇಳಿಕೆ: ಗ್ರಾಹಕರಿಗೆ ಗುಡ್ ನ್ಯೂಸ್, ಇಂದಿನಿಂದಲೇ ಹೊಸ ದರ ಜಾರಿ

ರಾಜ್ಯದ ಗ್ರಾಹಕರಿಗೆ ನಂದಿನಿ ಮೊಸರಿನ ಬೆಲೆ ಪ್ರತಿ ಲೀಟರ್‌ಗೆ 2 ರೂಪಾಯಿ ಕಡಿತಗೊಂಡಿದೆ. ಕೆಎಂಎಫ್ ಹೊಸ ಪರಿಷ್ಕೃತ ದರ ಇಂದಿನಿಂದಲೇ ಜಾರಿಯಾಗಿದ್ದು ಇಲ್ಲಿದೆ ಸಂಪೂರ್ಣ ಮಾಹಿತಿ.

KMF ನಂದಿನಿ ಮೊಸರಿನ ಪ್ಯಾಕೆಟ್ ಹಾಗೂ ಹೊಸ ದರ ಕಡಿತದ ಮಾಹಿತಿ
ರಾಜ್ಯದಲ್ಲಿ ನಂದಿನಿ ಮೊಸರಿನ ದರ ಲೀಟರ್‌ಗೆ 2 ರೂಪಾಯಿ ಕಡಿತಗೊಂಡಿದ್ದು, ಹೊಸ ದರ ಇಂದಿನಿಂದಲೇ ಜಾರಿಗೆ ಬಂದಿದೆ.

ಬೆಂಗಳೂರು: ರಾಜ್ಯದ ಗ್ರಾಹಕರಿಗೆ ಕರ್ನಾಟಕ ಹಾಲು ಒಕ್ಕೂಟ (KMF) ಸಿಹಿ ಸುದ್ದಿ ನೀಡಿದೆ. ನಂದಿನಿ ಮೊಸರಿನ ದರವನ್ನು ಪ್ರತಿ ಲೀಟರ್‌ಗೆ 2 ರೂಪಾಯಿ ಕಡಿತಗೊಳಿಸಲಾಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸೂಚನೆಯ ಮೇರೆಗೆ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ (KMF) ಈ ನಿರ್ಧಾರ ಕೈಗೊಂಡಿದ್ದು, ಇಂದಿನಿಂದಲೇ ಪರಿಷ್ಕೃತ ದರ ಜಾರಿಗೆ ಬರಲಿದೆ.

ರಾಜ್ಯದ ಹಾಲು ಉತ್ಪಾದಕ ರೈತರ ಮನವಿಯ ಮೇರೆಗೆ ಕಳೆದ ನವೆಂಬರ್ 1ರಿಂದ ಅನ್ವಯವಾಗುವಂತೆ ನಂದಿನಿ ಹಾಲು ಮತ್ತು ಮೊಸರಿನ ಮಾರಾಟ ದರವನ್ನು ಪರಿಷ್ಕರಿಸಿ ಹೆಚ್ಚಳ ಮಾಡಲಾಗಿತ್ತು. ಇದರಿಂದ ಮೊಸರಿನ ಬೆಲೆ ಏರಿಕೆಯಾಗಿದ್ದು, ಗ್ರಾಹಕರಿಗೆ ಹೆಚ್ಚಿನ ಹೊರೆಯಾಗಿತ್ತು. ಈ ಹಿನ್ನೆಲೆಯಲ್ಲಿ ಗ್ರಾಹಕರ ಹಿತದೃಷ್ಟಿಯಿಂದ ಮೊಸರಿನ ದರವನ್ನು ಕಡಿತಗೊಳಿಸುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೆಎಂಎಫ್‌ಗೆ ಸೂಚನೆ ನೀಡಿದ್ದರು. ಇದೀಗ ಸಿಎಂ ನಿರ್ದೇಶನದಂತೆ ಕೆಎಂಎಫ್ ಮೊಸರಿನ ಬೆಲೆಯನ್ನು ಇಳಿಕೆ ಮಾಡಿದೆ.

ನಂದಿನಿ ಮೊಸರಿನ ಹೊಸ ದರ ಎಷ್ಟು?

ದರ ಕಡಿತದ ಬಳಿಕ ಅರ್ಧ ಲೀಟರ್ ಹಾಗೂ ಒಂದು ಲೀಟರ್ ನಂದಿನಿ ಮೊಸರಿನ ಪ್ಯಾಕ್‌ಗಳ ಬೆಲೆಯಲ್ಲಿ ಬದಲಾವಣೆಯಾಗಿದೆ.

  • ಅರ್ಧ ಲೀಟರ್ ಪ್ಯಾಕ್: ಈ ಹಿಂದೆ 34 ರೂ. ಇದ್ದ ಬೆಲೆ ಇದೀಗ 33 ರೂ.ಗೆ ಇಳಿಕೆಯಾಗಿದೆ.

  • ಒಂದು ಲೀಟರ್ ಪ್ಯಾಕ್: ಈ ಹಿಂದೆ 68 ರೂ. ಇದ್ದ ಬೆಲೆ ಇದೀಗ 66 ರೂ.ಗೆ ಕಡಿತಗೊಂಡಿದೆ.

ನವೆಂಬರ್‌ನಲ್ಲಿ ಭಾರಿ ಏರಿಕೆಯಾಗಿತ್ತು!

ನವೆಂಬರ್ 1ರಿಂದ ಜಾರಿಗೆ ಬರುವಂತೆ ನಂದಿನಿ ಮೊಸರಿನ ಬೆಲೆಯನ್ನು ಪ್ರತಿ ಲೀಟರ್‌ಗೆ 14 ರೂಪಾಯಿ ಹಾಗೂ ಅರ್ಧ ಲೀಟರ್‌ಗೆ 6 ರೂಪಾಯಿ ಹೆಚ್ಚಿಸಲಾಗಿತ್ತು. ಈ ದರ ಏರಿಕೆಯಿಂದಾಗಿ ಒಂದು ಲೀಟರ್ ಮೊಸರಿನ ಬೆಲೆ 54 ರೂ.ನಿಂದ 68 ರೂ.ಗೆ ತಲುಪಿತ್ತು. ಅದೇ ರೀತಿ ಅರ್ಧ ಲೀಟರ್ ಮೊಸರಿನ ಬೆಲೆ 28 ರೂ.ನಿಂದ 34 ರೂ.ಗೆ ಏರಿಕೆಯಾಗಿತ್ತು.

ಇದೀಗ ಗ್ರಾಹಕರಿಗೆ ಸ್ವಲ್ಪಮಟ್ಟಿನ ಸಮಾಧಾನ ನೀಡುವ ನಿಟ್ಟಿನಲ್ಲಿ ಕೆಎಂಎಫ್ ದರ ಕಡಿತದ ನಿರ್ಧಾರ ಕೈಗೊಂಡಿದೆ. ಇದರಿಂದ ನಂದಿನಿ ಮೊಸರು ಖರೀದಿಸುವ ಗ್ರಾಹಕರಿಗೆ ಇನ್ನು ಮುಂದೆ ಪ್ರತಿ ಪ್ಯಾಕ್‌ನಲ್ಲೂ ಹಣ ಉಳಿತಾಯವಾಗಲಿದೆ.

ಲೈವ್

NTV ಕನ್ನಡ 24×7 ಸುದ್ದಿ

ಪೂರ್ಣವಾಗಿ ವೀಕ್ಷಿಸಿ
ಬರಹ

ಮೆಟ್ರೋ ಮತ್ತು ನಗರ ವರದಿಗಾರರು (City & Metro Reporter)

NTV ಕನ್ನಡ ಸಂಪಾದಕೀಯ ತಂಡ.