ಅಕ್ಷರ ಗಾತ್ರ

December 2026 Festivals: ಡಿಸೆಂಬರ್ ತಿಂಗಳಲ್ಲಿ ಬರುವ ಪ್ರಮುಖ ಹಬ್ಬಗಳು ಮತ್ತು ವಿಶೇಷ ದಿನಗಳ ಸಂಪೂರ್ಣ ಪಟ್ಟಿ ಇಲ್ಲಿದೆ

2026ರ ಡಿಸೆಂಬರ್ ತಿಂಗಳಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬಗಳು ಮತ್ತು ವಿಶೇಷ ದಿನಗಳ ವಿವರ ಇಲ್ಲಿದೆ. ಸುಬ್ರಹ್ಮಣ್ಯ ಷಷ್ಠಿ, ದತ್ತ ಜಯಂತಿ ಹಾಗೂ ಕ್ರಿಸ್‌ಮಸ್ ದಿನಾಂಕ ತಿಳಿದುಕೊಳ್ಳಿ.

2026 December Festivals List visual representation for NTV Kannada
2026ರ ಡಿಸೆಂಬರ್ ತಿಂಗಳ ಪ್ರಮುಖ ಧಾರ್ಮಿಕ ಹಬ್ಬಗಳು ಮತ್ತು ವಿಶೇಷ ದಿನಗಳ ಪಟ್ಟಿ.

ತಿಂಗಳುಗಳು ಹೇಗೆ ಉರುಳುತ್ತವೆ ಎಂಬುದೇ ತಿಳಿಯುವುದಿಲ್ಲ. ನೋಡನೋಡುತ್ತಿದ್ದಂತೆ 2026ರ ಕೊನೆಯ ತಿಂಗಳಾದ ಡಿಸೆಂಬರ್‌ ಅನ್ನು ಸ್ವಾಗತಿಸಲು ಸಿದ್ಧರಾಗಿದ್ದೇವೆ. ಹೊಸ ವರ್ಷದ ನಿರೀಕ್ಷೆಯಲ್ಲಿರುವ ಜನರಿಗೆ ಡಿಸೆಂಬರ್ ತಿಂಗಳು ಹಲವು ವಿಶೇಷತೆಗಳನ್ನು ಹೊತ್ತು ತರಲಿದೆ.

ಈ ತಿಂಗಳಲ್ಲಿ ಕಾಲಭೈರವಾಷ್ಟಮಿ, ಸುಬ್ರಹ್ಮಣ್ಯ ಷಷ್ಠಿ, ಗೀತಾ ಜಯಂತಿ, ದತ್ತಾತ್ರೇಯ ಜಯಂತಿ ಸೇರಿದಂತೆ ಹಲವು ಪ್ರಮುಖ ಹಬ್ಬಗಳು ಹಾಗೂ ಧಾರ್ಮಿಕ ಆಚರಣೆಗಳು ನಡೆಯಲಿವೆ. ಇದರ ಜೊತೆಗೆ ಡಿಸೆಂಬರ್ 25ರಂದು ಕ್ರಿಸ್‌ಮಸ್ ಹಬ್ಬವನ್ನು ಆಚರಿಸಲಾಗುತ್ತದೆ.

ಹಾಗಾದರೆ, 2026ರ ಡಿಸೆಂಬರ್ ತಿಂಗಳಲ್ಲಿ ಯಾವ ದಿನ ಯಾವ ಹಬ್ಬಗಳಿವೆ ಎಂಬ ಕುತೂಹಲ ನಿಮಗಿದೆಯೇ? ಈ ತಿಂಗಳ ಪ್ರಮುಖ ಹಬ್ಬಗಳು ಮತ್ತು ವಿಶೇಷ ದಿನಗಳ ಪಟ್ಟಿ ಇಲ್ಲಿದೆ.

ಡಿಸೆಂಬರ್ 1ರಂದು ಕಾಲಭೈರವಾಷ್ಟಮಿ ಆಚರಿಸಲಾಗುತ್ತದೆ. ಡಿಸೆಂಬರ್ 3ರಂದು ಮಹಾನಕ್ಷತ್ರ ಜ್ಯೇಷ್ಠ, ಡಿಸೆಂಬರ್ 4ರಂದು ಉತ್ಪತ್ತಿ ಏಕಾದಶಿ, ಡಿಸೆಂಬರ್ 6ರಂದು ಪ್ರದೋಷ ಹಾಗೂ ಡಿಸೆಂಬರ್ 7ರಂದು ಮಾಸ ಶಿವರಾತ್ರಿ ಬರಲಿವೆ. ಇನ್ನು ಡಿಸೆಂಬರ್ 8ರಂದು ಅಮಾವಾಸ್ಯೆ ಆಚರಣೆ ನಡೆಯಲಿದೆ. ಡಿಸೆಂಬರ್ 9ರಿಂದ ಮಾರ್ಗಶಿರ ಶುಕ್ಲ ಪಕ್ಷ ಆರಂಭವಾಗಲಿದೆ.

ಡಿಸೆಂಬರ್ 14ರಂದು ಸ್ಕಂದ ಪಂಚಮಿ, ಡಿಸೆಂಬರ್ 15ರಂದು ಸುಬ್ರಹ್ಮಣ್ಯ ಷಷ್ಠಿ ಆಚರಿಸಲಾಗುತ್ತದೆ. ಡಿಸೆಂಬರ್ 16ರಂದು ಧನು ಸಂಕ್ರಮಣ ನಡೆಯಲಿದ್ದು, ಡಿಸೆಂಬರ್ 17ರಿಂದ ಧನು ಪೂಜಾರಂಭವಾಗಲಿದೆ. ಡಿಸೆಂಬರ್ 18ರಂದು ಧನುರ್ವ್ಯತೀಪಾತ ಹಾಗೂ ಡಿಸೆಂಬರ್ 19ರಂದು ಮಹಾವೀರ ತಪ ಕಲ್ಯಾಣ ಇರಲಿದೆ.

ಡಿಸೆಂಬರ್ 20ರಂದು ಗೀತಾ ಜಯಂತಿ ಹಾಗೂ ಮೋಕ್ಷದ ಏಕಾದಶಿ ಆಚರಿಸಲಾಗುತ್ತದೆ. ಡಿಸೆಂಬರ್ 21ರಂದು ಮುಕ್ಕೋಟಿ ದ್ವಾದಶಿ, ಡಿಸೆಂಬರ್ 22ರಂದು ಹನುಮದ್ವ್ರತ ನಡೆಯಲಿದೆ. ಡಿಸೆಂಬರ್ 23ರಂದು ಮಾರ್ಗಶಿರ ಹುಣ್ಣಿಮೆ ಹಾಗೂ ದತ್ತಾತ್ರೇಯ ಜಯಂತಿಯನ್ನು ಆಚರಿಸಲಾಗುತ್ತದೆ.

ಇನ್ನು ಡಿಸೆಂಬರ್ 25ರಂದು ಕ್ರೈಸ್ತ ಸಮುದಾಯದ ಪ್ರಮುಖ ಹಬ್ಬವಾದ ಕ್ರಿಸ್‌ಮಸ್‌ ಅನ್ನು ದೇಶಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ಡಿಸೆಂಬರ್ 26ರಂದು ಸಂಕಷ್ಟಹರ ಚತುರ್ಥಿ ಹಾಗೂ ಧನುರ್ವೈಧೃತಿ ಇರಲಿವೆ.

ಹೀಗೆ 2026ರ ಕೊನೆಯ ತಿಂಗಳಾದ ಡಿಸೆಂಬರ್‌ನಲ್ಲಿ ಹಲವು ಧಾರ್ಮಿಕ ಹಬ್ಬಗಳು, ವ್ರತಗಳು ಹಾಗೂ ವಿಶೇಷ ಆಚರಣೆಗಳು ನಡೆಯಲಿವೆ. ವರ್ಷದ ಕೊನೆಯ ತಿಂಗಳನ್ನು ಹಬ್ಬಗಳ ಸಂಭ್ರಮದೊಂದಿಗೆ ಬರಮಾಡಿಕೊಳ್ಳಲು ಜನರು ಸಜ್ಜಾಗುತ್ತಿದ್ದಾರೆ.

ಲೈವ್

NTV ಕನ್ನಡ 24×7 ಸುದ್ದಿ

ಪೂರ್ಣವಾಗಿ ವೀಕ್ಷಿಸಿ
ಬರಹ

ಜೀವನಶೈಲಿ ಮತ್ತು ಅಧ್ಯಾತ್ಮ ವರದಿಗಾರರು (Lifestyle & Spirituality Reporter)

NTV ಕನ್ನಡ ಸಂಪಾದಕೀಯ ತಂಡ.