ಅಕ್ಷರ ಗಾತ್ರ

ಟೈಗರ್ ಶ್ರಾಫ್ ಶೂ*ಟೌಟ್ ಕೇಸ್: ಮುಂಬೈನಲ್ಲಿ ಫೈ*ರಿಂಗ್, ರಾಜಸ್ಥಾನದಲ್ಲಿ ಅರೆಸ್ಟ್!

ಗಾಯಗೊಂಡಿರುವ ಬಾಲಿವುಡ್ ನಟ Tiger Shroff ಮತ್ತು ಸಿಸಿಟಿವಿ ದೃಶ್ಯದಲ್ಲಿ ಕಾಣಿಸಿಕೊಂಡ ಶಂಕಿತರು.

ಮುಂಬೈ: ಮುಂಬೈನ ಜುಹು ಪ್ರದೇಶದಲ್ಲಿ ಬಾಲಿವುಡ್ ನಟ ಟೈಗರ್ ಶ್ರಾಫ್ (Tiger Shroff) ಅವರ ಕಾರಿನ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಅಪ್ರಾಪ್ತ ಸೇರಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ರಾಜಸ್ಥಾನದ ಕೋಟಾ ನಿಲ್ದಾಣದಲ್ಲಿ ಕಾರ್ಯಾಚರಣೆ: ಗುಂಡಿನ ದಾಳಿ ನಡೆಸಿದ ಬಳಿಕ ತಲೆಮರೆಸಿಕೊಂಡಿದ್ದ 17, 18 ಹಾಗೂ 22 ವರ್ಷ ವಯಸ್ಸಿನ ಮೂವರು ಆರೋಪಿಗಳನ್ನು ‘ಆಂಟಿ-ಗ್ಯಾಂಗ್ಸ್‌ಟರ್ ಟಾಸ್ಕ್ ಫೋರ್ಸ್’ (ATF) ಮತ್ತು ರಾಜಸ್ಥಾನ ಪೊಲೀಸರು ಸೋಮವಾರ ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಮುಂಬೈನಿಂದ ದೆಹಲಿಯತ್ತ ‘ಪುಣೆ-ಜೈಪುರ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್’ (ರೈಲು ಸಂಖ್ಯೆ 12939) ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಈ ಆರೋಪಿಗಳನ್ನು ರಾಜಸ್ಥಾನದ ಕೋಟಾ ರೈಲು ನಿಲ್ದಾಣದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವಸಾಯಿಯಲ್ಲಿ ರೈಲು ಹತ್ತಿದ್ದ ಆರೋಪಿಗಳು: ಗುಂಡಿನ ದಾಳಿಯ ನಂತರ ಪರಾರಿಯಾಗಲು ಯತ್ನಿಸಿದ ಆರೋಪಿಗಳು ವಸಾಯಿಯಲ್ಲಿ ರೈಲು ಹತ್ತಿದ್ದರು. ಪುಣೆ ಜಂಕ್ಷನ್‌ನಿಂದ ಜೈಪುರ ಜಂಕ್ಷನ್ ನಡುವೆ ಸಂಚರಿಸುವ ಈ ರೈಲು ಕಲ್ಯಾಣ ಜಂಕ್ಷನ್ ಮತ್ತು ವಸಾಯಿ ರಸ್ತೆಯಲ್ಲಿ ಸ್ಟಾಪ್ ಹೊಂದಿದ್ದು, ಗುಜರಾತ್ ಹಾಗೂ ಮಧ್ಯಪ್ರದೇಶದ ಮೂಲಕ ಹಾದು ರಾಜಸ್ಥಾನವನ್ನು ಪ್ರವೇಶಿಸುತ್ತದೆ. ರೈಲು ಕೋಟಾ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಈ ಮೂವರು ಆರೋಪಿಗಳನ್ನು ಪೊಲೀಸರು ತಡೆಹಿಡಿದು ಬಂಧಿಸಿದ್ದಾರೆ.

ಲೈವ್

NTV ಕನ್ನಡ 24×7 ಸುದ್ದಿ

ಪೂರ್ಣವಾಗಿ ವೀಕ್ಷಿಸಿ
ಬರಹ

ಅಪರಾಧ ಮತ್ತು ಕಾನೂನು ವರದಿಗಾರರು (Crime & Legal Reporter)

NTV ಕನ್ನಡ ಸಂಪಾದಕೀಯ ತಂಡ.