ಅಕ್ಷರ ಗಾತ್ರ

4 ವರ್ಷ ಪ್ರೀತಿಸಿದ್ದ ಪ್ರಿಯಕರನಿಂದಲೇ ನರ್ಸಿಂಗ್ ವಿದ್ಯಾರ್ಥಿನಿ ಕೊಲೆ; ಬೆಂಗಳೂರಿನ ಲಾಡ್ಜ್ʼನಲ್ಲಿ ಭೀಕರ ಘಟನೆ!

ಬೆಂಗಳೂರಿನ ಲಾಡ್ಜ್‌ನಲ್ಲಿ ನರ್ಸಿಂಗ್ ವಿದ್ಯಾರ್ಥಿನಿ ಕೊಲೆ ನಡೆದಿದ್ದು, ಆಕೆಯ ಪ್ರಿಯಕರ ಗೋಕುಲ್ ಕೃಷ್ಣನನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಗೆ ಅಸಲಿ ಕಾರಣವೇನು ತಿಳಿಯಿರಿ.

Bengaluru Cottonpet lodge crime spot where nursing student Ganga was killed by lover Gokul Krishna
ಬೆಂಗಳೂರಿನ ಕಾಟನ್‌ಪೇಟೆ ಲಾಡ್ಜ್‌ನಲ್ಲಿ ನರ್ಸಿಂಗ್ ವಿದ್ಯಾರ್ಥಿನಿ ಹತ್ಯೆ ಪ್ರಕರಣ ಸಂಬಂಧ ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು.

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನರ್ಸಿಂಗ್ ವಿದ್ಯಾರ್ಥಿನಿಯನ್ನು ಆಕೆಯ ಪ್ರಿಯಕರನೇ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ನಗರದ ಕಾಟನ್‌ಪೇಟೆಯ ಮಸ್ತಾನ್ ದರ್ಗಾ ಬಳಿಯ ಲಾಡ್ಜ್‌ವೊಂದರಲ್ಲಿ ನಡೆದಿದೆ. ಕೇರಳ ಮೂಲದ ಗಂಗಾ ಕೊಲೆಯಾದ ವಿದ್ಯಾರ್ಥಿನಿಯಾಗಿದ್ದು, ಆಕೆಯ ಪ್ರಿಯಕರ ಗೋಕುಲ್ ಕೃಷ್ಣ ಕೊಲೆ ಆರೋಪಿಯಾಗಿದ್ದಾನೆ.

ಗಂಗಾ ಹಾಗೂ ಗೋಕುಲ್ ಕೃಷ್ಣ ಇಬ್ಬರೂ ಕೇರಳದ ಆಡೂರು ಮೂಲದವರಾಗಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಈ ಜೋಡಿ, ಬೆಂಗಳೂರಿನ ಲಾಡ್ಜ್‌ನಲ್ಲಿ ಭೇಟಿಯಾಗಿದ್ದ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ.

ಚಾಕುವಿನಿಂದ ಇರಿದು ಹತ್ಯೆ

ಮಾಹಿತಿಯ ಪ್ರಕಾರ, ಕೊಲೆಗೂ ಮುನ್ನ ಆರೋಪಿ ಗೋಕುಲ್ ಕೃಷ್ಣ ಚಾಕುವನ್ನು ಖರೀದಿಸಿದ್ದ ಎನ್ನಲಾಗಿದೆ. ನವೆಂಬರ್ 27ರ ಬೆಳಗ್ಗೆ ಸುಮಾರು 10 ಗಂಟೆಯ ವೇಳೆಗೆ ಇಬ್ಬರ ನಡುವೆ ಗಲಾಟೆ ಆರಂಭವಾಗಿದೆ. ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿದಾಗ ಆರೋಪಿ ಚಾಕುವಿನಿಂದ ಗಂಗಾಗೆ ಇರಿದು ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ಆರೋಪಿ ಪೊಲೀಸ್ ವಶಕ್ಕೆ

ಘಟನೆ ತಿಳಿಯುತ್ತಿದ್ದಂತೆ ಕಾಟನ್‌ಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಯಾಗಿರುವ ಗೋಕುಲ್ ಕೃಷ್ಣನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇಬ್ಬರ ನಡುವೆ ಗಲಾಟೆ ನಡೆಯಲು ಕಾರಣವೇನು? ಕೊಲೆಗೆ ನಿಖರವಾದ ಹಿನ್ನೆಲೆ ಏನು? ಎಂಬುದು ಪೊಲೀಸ್ ತನಿಖೆಯಿಂದ ಇನ್ನಷ್ಟೇ ತಿಳಿದುಬರಬೇಕಿದೆ.

ಲೈವ್

NTV ಕನ್ನಡ 24×7 ಸುದ್ದಿ

ಪೂರ್ಣವಾಗಿ ವೀಕ್ಷಿಸಿ
ಬರಹ

ಮೆಟ್ರೋ ಮತ್ತು ನಗರ ವರದಿಗಾರರು (City & Metro Reporter)

NTV ಕನ್ನಡ ಸಂಪಾದಕೀಯ ತಂಡ.