ಅಕ್ಷರ ಗಾತ್ರ

ಯಲ್ಲಮ್ಮನ ದೇಗುಲದ ಗೋಡೆ ಮೇಲೆ ಮಧ್ಯದ ಬೆರಳಿನ ಚಿಹ್ನೆ; ಕಿಡಿಗೇಡಿಗಳ ಬಂಧನಕ್ಕೆ ಒತ್ತಾಯ

Shivamogga ದ ಯಲ್ಲಮ್ಮನ ದೇಗುಲದ ಗೋಡೆಯ ಮೇಲೆ ಕಿಡಿಗೇಡಿಗಳು ಬಿಡಿಸಿರುವ ಮಧ್ಯದ ಬೆರಳಿನ ಅಸಭ್ಯ ಚಿಹ್ನೆ.

ಶಿವಮೊಗ್ಗ: ಧಾರ್ಮಿಕ ಕೇಂದ್ರದ ಗೋಡೆಯ ಮೇಲೆ ಅಸಭ್ಯ ಚಿಹ್ನೆ ಬಿಡಿಸಿ ಕಿಡಿಗೇಡಿಗಳು ವಿಕೃತಿ ಮೆರೆದಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ನಗರದ ಅಶೋಕ ರಸ್ತೆಯ ಬೇಡರ ಬೀದಿಯಲ್ಲಿರುವ ಯಲ್ಲಮ್ಮನ ದೇವಸ್ಥಾನದ ಗೋಡೆಯ ಮೇಲೆ ಮಧ್ಯದ ಬೆರಳು ತೋರಿಸುವ ಚಿಹ್ನೆ ಬಿಡಿಸಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ದೇವಸ್ಥಾನದ ಗೋಡೆಯ ಮೇಲೆ ಅಸಭ್ಯ ಚಿಹ್ನೆ ಬಿಡಿಸಿರುವ ಕೃತ್ಯವನ್ನು ದೇವಸ್ಥಾನ ಸಮಿತಿ ತೀವ್ರವಾಗಿ ಖಂಡಿಸಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶದಿಂದಲೇ ಈ ಕೃತ್ಯ ಎಸಗಲಾಗಿದೆಯೇ ಎಂಬ ಬಗ್ಗೆ ತನಿಖೆ ನಡೆಸಬೇಕು ಎಂದು ಸಮಿತಿ ಆಗ್ರಹಿಸಿದೆ.

ಕೃತ್ಯ ಎಸಗಿದವರನ್ನು ತಕ್ಷಣ ಪತ್ತೆಹಚ್ಚಿ ಬಂಧಿಸಬೇಕು. ದೇವಸ್ಥಾನದ ಗೌರವಕ್ಕೆ ಧಕ್ಕೆ ತಂದಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದೆ.

ನಗರದ ಧಾರ್ಮಿಕ ಕೇಂದ್ರಗಳಲ್ಲಿ ಇಂತಹ ಘಟನೆಗಳು ಮತ್ತೆ ನಡೆಯದಂತೆ ಪೊಲೀಸರು ಎಚ್ಚರಿಕೆ ವಹಿಸಬೇಕು. ದೇವಸ್ಥಾನಗಳ ಭದ್ರತೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ದೇವಸ್ಥಾನ ಸಮಿತಿ ಮನವಿ ಮಾಡಿದೆ.

ಲೈವ್

NTV ಕನ್ನಡ 24×7 ಸುದ್ದಿ

ಪೂರ್ಣವಾಗಿ ವೀಕ್ಷಿಸಿ
ಬರಹ

ಸಂಪಾದಕರು (Editor)

ಕರ್ನಾಟಕದ ರಾಜಕೀಯ, ಆಡಳಿತ, ವಿಧಾನಸೌಧ ಹಾಗೂ ಚುನಾವಣಾ ವಿದ್ಯಮಾನಗಳನ್ನು 10+ ವರ್ಷಗಳಿಂದ ವರದಿ ಮಾಡುತ್ತಿರುವ ಹಿರಿಯ ಪತ್ರಕರ್ತರು. Senior Political Correspondent covering Karnataka state politics, governance, and policy with over a decade of journalistic experience.