ಅಕ್ಷರ ಗಾತ್ರ

ಸಿದ್ದರಾಮಯ್ಯ ಮೇಲಿನ ಪ್ರೀತಿಗೆ ಇದಕ್ಕಿಂತ ಸಾಕ್ಷಿ ಬೇಕಾ? 15 ದಿನಗಳ ಕಂದಮ್ಮನಿಗೆ ‘ಅನ್ನರಾಮಯ್ಯ’ ಎಂದು ಹೆಸರಿಟ್ಟ ದಂಪತಿ!

ಸಿದ್ದರಾಮಯ್ಯ ಮತ್ತು ಅವರ ಹೆಸರಿನಿಂದ ಪ್ರೇರಿತವಾದ ಅನ್ನರಾಮಯ್ಯ ಹೆಸರಿನ ಮಗು.

ಬೀದರ್: ರಾಜಕೀಯ ನಾಯಕನ ಮೇಲಿನ ಅಭಿಮಾನವನ್ನು ವಿಭಿನ್ನ ರೀತಿಯಲ್ಲಿ ವ್ಯಕ್ತಪಡಿಸಿರುವ ದಂಪತಿಯೊಂದು ಬೀದರ್ ಜಿಲ್ಲೆಯಲ್ಲಿ ಗಮನ ಸೆಳೆದಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲಿನ ಅಭಿಮಾನ ಹಾಗೂ ಅವರು ಜಾರಿಗೆ ತಂದ ‘ಅನ್ನಭಾಗ್ಯ’ ಯೋಜನೆಯಿಂದ ಪ್ರೇರಿತರಾದ ದಂಪತಿ, ತಮ್ಮ 15 ದಿನಗಳ ಗಂಡು ಮಗುವಿಗೆ ‘ಅನ್ನರಾಮಯ್ಯ’ ಎಂದು ನಾಮಕರಣ ಮಾಡಿದ್ದಾರೆ.

ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ದುಗುಲಗುಂಡಿ ಗ್ರಾಮದ ರಾಜಪ್ಪ ಮತ್ತು ಅಂಬಿಕಾ ದಂಪತಿ ತಮ್ಮ ಮಗುವಿಗೆ ಈ ವಿಶೇಷ ಹೆಸರಿಟ್ಟಿದ್ದಾರೆ. ಅನ್ನಭಾಗ್ಯ ಯೋಜನೆಯಿಂದ ಪ್ರೇರಣೆ ಪಡೆದು, ಸಿದ್ದರಾಮಯ್ಯ ಅವರ ಮೇಲಿನ ಅಭಿಮಾನವನ್ನು ವಿಭಿನ್ನವಾಗಿ ವ್ಯಕ್ತಪಡಿಸಲು ಈ ಹೆಸರನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

‘ಅನ್ನ’ + ‘ರಾಮಯ್ಯ’ = ಅನ್ನರಾಮಯ್ಯ!

ಸಿದ್ದರಾಮಯ್ಯ ಅವರ ಹೆಸರಿನ ‘ರಾಮಯ್ಯ’ ಪದ ಹಾಗೂ ಅನ್ನಭಾಗ್ಯ ಯೋಜನೆಯ ‘ಅನ್ನ’ ಪದವನ್ನು ಸೇರಿಸಿ ಮಗುವಿಗೆ ‘ಅನ್ನರಾಮಯ್ಯ’ ಎಂದು ಹೆಸರಿಡಲಾಗಿದೆ. ಅನ್ನಭಾಗ್ಯ ಯೋಜನೆಯ ಮೂಲಕ ಬಡ ಕುಟುಂಬಗಳಿಗೆ ಆಹಾರ ಭದ್ರತೆ ಕಲ್ಪಿಸುವ ಪ್ರಯತ್ನದಿಂದ ಪ್ರೇರಿತರಾಗಿ ಈ ನಿರ್ಧಾರ ಕೈಗೊಂಡಿದ್ದಾಗಿ ದಂಪತಿ ತಿಳಿಸಿದ್ದಾರೆ.

ಹೆಣ್ಣು ಮಗುವಾಗಿದ್ದರೆ ‘ಪಾರ್ವತಿರಾಮಯ್ಯ’!

ವಿಶೇಷವೆಂದರೆ, ಮಗುವಿನ ಜನನಕ್ಕೂ ಮೊದಲೇ ದಂಪತಿ ಹೆಸರನ್ನು ನಿರ್ಧರಿಸಿದ್ದರು. ಹೆಣ್ಣು ಮಗುವಾದರೆ ‘ಪಾರ್ವತಿರಾಮಯ್ಯ’ ಎಂದು, ಗಂಡು ಮಗುವಾದರೆ ‘ಅನ್ನರಾಮಯ್ಯ’ ಎಂದು ಹೆಸರಿಡಲು ತೀರ್ಮಾನಿಸಿದ್ದರು. ಅದರಂತೆ ಗಂಡು ಮಗು ಜನಿಸಿದ ಹಿನ್ನೆಲೆಯಲ್ಲಿ ತಮ್ಮ ನಿರ್ಧಾರದಂತೆ ನಾಮಕರಣ ಮಾಡಿದ್ದಾರೆ.

ಲೈವ್

NTV ಕನ್ನಡ 24×7 ಸುದ್ದಿ

ಪೂರ್ಣವಾಗಿ ವೀಕ್ಷಿಸಿ
ಬರಹ

ಸಂಪಾದಕರು (Editor)

ಕರ್ನಾಟಕದ ರಾಜಕೀಯ, ಆಡಳಿತ, ವಿಧಾನಸೌಧ ಹಾಗೂ ಚುನಾವಣಾ ವಿದ್ಯಮಾನಗಳನ್ನು 10+ ವರ್ಷಗಳಿಂದ ವರದಿ ಮಾಡುತ್ತಿರುವ ಹಿರಿಯ ಪತ್ರಕರ್ತರು. Senior Political Correspondent covering Karnataka state politics, governance, and policy with over a decade of journalistic experience.