ಅಕ್ಷರ ಗಾತ್ರ

ಈ ಬಾರಿ ಹಿಂಗಾರು ಬೆಳೆ ಸುಭಿಕ್ಷ, ಉತ್ತಮ ಮಳೆ: ಧಾರವಾಡದಲ್ಲಿ ಕೋಡಿಮಠ ಶ್ರೀಗಳ ಭವಿಷ್ಯ!

ಕಾವಿ ವಸ್ತ್ರ ಧರಿಸಿ ಕುಳಿತಿರುವ ಕೋಡಿಮಠ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ.

ಧಾರವಾಡ: ಪ್ರಸಕ್ತ ಸಾಲಿನಲ್ಲಿ ಹಿಂಗಾರು ಬೆಳೆ ಸುಭಿಕ್ಷವಾಗಲಿದ್ದು, ಉತ್ತಮ ಮಳೆಯಾಗಲಿದೆ ಎಂದು ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ಭವಿಷ್ಯ ನುಡಿದಿದ್ದಾರೆ.

ಹಿಂಗಾರಿನಲ್ಲಿ ನೆಮ್ಮದಿ ಮತ್ತು ಸುಭಿಕ್ಷೆ: ಧಾರವಾಡದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಮುಂಗಾರು ಮಳೆಯಾಗುವುದಿಲ್ಲ, ನೀರಿಗಾಗಿ ಹಾಹಾಕಾರ ಉಂಟಾಗುತ್ತದೆ, ಅನ್ನಕ್ಕೆ ಕೊರತೆಯಾಗಿ ಜನ ಅಸುನೀಗುತ್ತಾರೆ ಎಂದು ಈ ಹಿಂದೆ ಭವಿಷ್ಯ ನುಡಿದಿದ್ದೆ. ಅದೇ ಪ್ರಕಾರ ನಡೆದಿದೆ. ಆದರೆ, ಈ ಬಾರಿ ಹಿಂಗಾರು ಮಳೆಯಾಗಲಿದೆ. ಜನರಿಗೆ ಸುಭಿಕ್ಷೆ ಮತ್ತು ನೆಮ್ಮದಿ ಸಿಗಲಿದೆ ಹಾಗೂ ಜಲಚರಗಳಿಗೂ ಒಳ್ಳೆಯದಾಗಲಿದೆ” ಎಂದು ತಿಳಿಸಿದರು.

ಅಖಂಡ ಕರ್ನಾಟಕದ ಸಂಸ್ಕೃತಿ ಮತ್ತು ಜಂಬೂ ಸವಾರಿ: “ಅಖಂಡ ಕರ್ನಾಟಕ ಒಂದಾಗಿ ಸಾಗಬೇಕು. ಇದು ಸಾಧ್ಯವಾಗಬೇಕಾದರೆ ಸಾಹಿತ್ಯಿಕ, ಸಾಂಸ್ಕೃತಿಕ ನೆಲೆಗಟ್ಟು, ಜನಜೀವನ, ಮಳೆ ಹಾಗೂ ಬೆಳೆ ಚೆನ್ನಾಗಿರಬೇಕು. ಆ ದೃಷ್ಟಿಯಿಂದ ಇಂದು ಧಾರವಾಡದಲ್ಲಿ ನಡೆಯುತ್ತಿರುವ ಜಂಬೂ ಸವಾರಿ ಅಖಂಡ ರಾಜ್ಯದ ಸಂಸ್ಕೃತಿಯ ಪ್ರತೀಕವಾಗಿದೆ.

ಮೈಸೂರಿನಲ್ಲಿ ಒಂದು ಹಾಗೂ ಉತ್ತರ ಕರ್ನಾಟಕದಲ್ಲಿ ಒಂದು ಜಂಬೂ ಸವಾರಿ ನಡೆಯುತ್ತಿರುವುದು ಏಕತಾ ಮನೋಭಾವದ ಸಂದೇಶ ನೀಡುತ್ತಿದೆ. ಮನುಷ್ಯ ಮನುಷ್ಯನಾಗಿ ಬಾಳಬೇಕಾದರೆ ಹಿರಿಯರ ಆದರ್ಶ ಮುಖ್ಯ, ಆ ಆದರ್ಶದ ಸಂಕೇತವೇ ಈ ದಸರಾ ಕಾರ್ಯಕ್ರಮ” ಎಂದು ಶ್ರೀಗಳು ಬಣ್ಣಿಸಿದರು.

ರಾಜ್ಯ ರಾಜಕಾರಣದ ಬಗ್ಗೆ ಮಾರ್ಮಿಕ ಉತ್ತರ: ಇದೇ ವೇಳೆ ರಾಜ್ಯ ರಾಜಕಾರಣದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶ್ರೀಗಳು, “ಅದರ ಬಗ್ಗೆ ನನಗಿಂತ ನಿಮಗೇ ಚೆನ್ನಾಗಿ ಗೊತ್ತಿದೆ. ಎಲ್ಲರಿಗೂ ಒಳ್ಳೆಯದಾಗಲಿ, ದೈವ ಕೃಪೆ ಎಲ್ಲರ ಮೇಲಿರಲಿ. ನಮಗೆ ಬೇಕಾಗಿರುವುದು ಮಳೆ-ಬೆಳೆ. ರೋಗ-ರುಜಿನಗಳು ದೂರವಾಗಿ ಮನುಷ್ಯನಿಗೆ ನೆಮ್ಮದಿ ಹಾಗೂ ಶಾಂತಿ ಸಿಗಬೇಕು” ಎಂದು ಹಾರೈಸಿದರು.

ಲೈವ್

NTV ಕನ್ನಡ 24×7 ಸುದ್ದಿ

ಪೂರ್ಣವಾಗಿ ವೀಕ್ಷಿಸಿ
ಬರಹ

ಸಂಪಾದಕರು (Editor)

ಕರ್ನಾಟಕದ ರಾಜಕೀಯ, ಆಡಳಿತ, ವಿಧಾನಸೌಧ ಹಾಗೂ ಚುನಾವಣಾ ವಿದ್ಯಮಾನಗಳನ್ನು 10+ ವರ್ಷಗಳಿಂದ ವರದಿ ಮಾಡುತ್ತಿರುವ ಹಿರಿಯ ಪತ್ರಕರ್ತರು. Senior Political Correspondent covering Karnataka state politics, governance, and policy with over a decade of journalistic experience.