ಅಕ್ಷರ ಗಾತ್ರ

Breaking News: ಶಿವಮೊಗ್ಗ ಡಿಸಿ ಕಚೇರಿ ಮುಂದೆ ಹೈಡ್ರಾಮಾ: ಮರ ಹತ್ತಿ ಪ್ರತಿಭಟನೆ ನಡೆಸಿದ ರೈತ!

Shivamogga ಡಿಸಿ ಕಚೇರಿ ಆವರಣದ ಮರ ಹತ್ತಿ ಕುಳಿತಿರುವ ರೈತನನ್ನು ಕೆಳಗಿಳಿಸಲು ಬಂದಿರುವ ರಕ್ಷಣಾ ವಾಹನ ಮತ್ತು ಪೊಲೀಸರು.

ಶಿವಮೊಗ್ಗ: ಜಮೀನಿನ ಪಹಣಿ ಹಾಗೂ ದಾಖಲೆಗಳ ಕೆಲಸ ಮಾಡಿಕೊಡಲು ₹25 ಲಕ್ಷ ಲಂಚ ಪಡೆದಿದ್ದಾರೆ ಎಂದು ಆರೋಪಿಸಿ ರೈತರು ಶಿವಮೊಗ್ಗದಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಈ ವೇಳೆ ರೈತರೊಬ್ಬರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿದ್ದ ಆಲದ ಮರ ಹತ್ತಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.

ವರ್ಗಾವಣೆಯಾಗಿರುವ ತಹಶೀಲ್ದಾರ್ ರಾಜೀವ್ ವಿರುದ್ಧ ರೈತರು ಗಂಭೀರ ಆರೋಪ ಮಾಡಿದ್ದಾರೆ. ತಮ್ಮ ಜಮೀನಿನ ದಾಖಲೆಗಳನ್ನು ಸರಿಪಡಿಸಿಕೊಡುವುದಾಗಿ ಹೇಳಿ ಹಣ ಪಡೆದಿದ್ದರೂ ಕೆಲಸ ಮಾಡಿಕೊಡದೆ ವಂಚಿಸಿದ್ದಾರೆ ಎಂದು 12 ಕುಟುಂಬಗಳು ಆರೋಪಿಸಿವೆ.

ಇದರಿಂದ ಆಕ್ರೋಶಗೊಂಡ ರೈತ ನಾಗರಾಜ್, ಏಣಿ ಸಹಾಯದಿಂದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಆಲದ ಮರವನ್ನೇರಿ ಪ್ರತಿಭಟನೆ ನಡೆಸಿದರು. ಸುಮಾರು ನಾಲ್ಕು ಗಂಟೆಗಳ ಕಾಲ ಮರದ ಮೇಲೆಯೇ ಕುಳಿತು ಅಧಿಕಾರಿಗಳ ಗಮನ ಸೆಳೆಯಲು ಪ್ರಯತ್ನಿಸಿದರು.

ಬಳಿಕ ಅಧಿಕಾರಿಗಳು ರೈತರ ಮನವಿಗೆ ಸ್ಪಂದಿಸಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ನಾಗರಾಜ್ ಮರದಿಂದ ಕೆಳಗಿಳಿದರು. ಆದರೆ, ವರ್ಗಾವಣೆಯಾಗಿರುವ ತಹಶೀಲ್ದಾರ್ ವಿರುದ್ಧ ರೈತರ ಆಕ್ರೋಶ ಮಾತ್ರ ಮುಂದುವರಿದಿದೆ.

ಲೈವ್

NTV ಕನ್ನಡ 24×7 ಸುದ್ದಿ

ಪೂರ್ಣವಾಗಿ ವೀಕ್ಷಿಸಿ
ಬರಹ

ಸಂಪಾದಕರು (Editor)

ಕರ್ನಾಟಕದ ರಾಜಕೀಯ, ಆಡಳಿತ, ವಿಧಾನಸೌಧ ಹಾಗೂ ಚುನಾವಣಾ ವಿದ್ಯಮಾನಗಳನ್ನು 10+ ವರ್ಷಗಳಿಂದ ವರದಿ ಮಾಡುತ್ತಿರುವ ಹಿರಿಯ ಪತ್ರಕರ್ತರು. Senior Political Correspondent covering Karnataka state politics, governance, and policy with over a decade of journalistic experience.