ಅಕ್ಷರ ಗಾತ್ರ

Ranabaali movie review: ವಿಜಯ್ ಮಾಸ್ ಅವತಾರಕ್ಕೆ ಫಿದಾ ಆದ್ರಾ ಫ್ಯಾನ್ಸ್? ನೆಟ್ಟಿಗರು ಹೇಳಿದ್ದೇನು?

ರಣಬಾಲಿ ಚಿತ್ರದಲ್ಲಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ಸಾಂಪ್ರದಾಯಿಕ ಅವತಾರ.

ಮಾಸ್ ಅವತಾರದಲ್ಲಿ ವಿಜಯ್ ದೇವರಕೊಂಡ.. ಗ್ಲಾಮರ್ ಜೊತೆಗೆ ಪವರ್‌ಫುಲ್ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ.. ಹಾಲಿವುಡ್ ವಿಲನ್ ಎಂಟ್ರಿ.. ಭರ್ಜರಿ ಬಜೆಟ್.. ಅದ್ಧೂರಿ ಮೇಕಿಂಗ್! ಇಷ್ಟೆಲ್ಲ ಇದ್ದರೂ ‘ರಣಬಾಲಿ’ ಸಿನಿಮಾ ಪ್ರೇಕ್ಷಕರ ಮನಸ್ಸು ಗೆದ್ದಿದ್ಯಾ? ಅಥವಾ ಭಾರಿ ನಿರೀಕ್ಷೆ ಹುಟ್ಟಿಸಿ ನಿರಾಸೆ ಮೂಡಿಸಿದ್ಯಾ?

ಟಾಲಿವುಡ್‌ನ ಬಹುನಿರೀಕ್ಷಿತ ಸಿನಿಮಾ ‘ರಣಬಾಲಿ’ ಇಂದು ತೆರೆಗೆ ಬಂದಿದೆ. ಹಲವು ವರ್ಷಗಳ ಬಳಿಕ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಜೋಡಿ ಮತ್ತೆ ಒಂದೇ ಸಿನಿಮಾದಲ್ಲಿ ಕಾಣಿಸಿಕೊಂಡಿದೆ.

ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯ ಕಥೆಯನ್ನು ಹೊಂದಿರುವ ಈ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಮಾಸ್ ಅವತಾರದಲ್ಲಿ ಅಬ್ಬರಿಸಿದ್ದಾರೆ. ಮತ್ತೊಂದು ವಿಶೇಷ ಅಂದ್ರೆ, ಹಾಲಿವುಡ್ ನಟ ಅರ್ನಾಲ್ಡ್ ವೋಸ್ಲೊ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಆದ್ರೆ ಸಿನಿಮಾ ರಿಲೀಸ್ ಆದ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಒಂದು ಕಡೆ ವಿಜಯ್–ರಶ್ಮಿಕಾ ಜೋಡಿಗೆ ಫುಲ್ ಮಾರ್ಕ್ಸ್! ಇನ್ನೊಂದು ಕಡೆ ಕಥೆ, ಚಿತ್ರಕಥೆಗೆ ಪ್ರೇಕ್ಷಕರಿಂದ ನೆಗೆಟಿವ್ ರಿವ್ಯೂ!

ಕೆಲವು ನೆಟ್ಟಿಗರ ಪ್ರಕಾರ, ವಿಜಯ್ ದೇವರಕೊಂಡ ನಟನೆ ಅದ್ಭುತವಾಗಿದೆ. ರಶ್ಮಿಕಾ ಮಂದಣ್ಣ ಅಭಿನಯವೂ ಗಮನ ಸೆಳೆಯುತ್ತದೆ. ಇಬ್ಬರ ಆನ್‌ಸ್ಕ್ರೀನ್ ಕೆಮಿಸ್ಟ್ರಿ ಸಿನಿಮಾದ ಪ್ರಮುಖ ಆಕರ್ಷಣೆ ಎನ್ನಲಾಗುತ್ತಿದೆ. ನಿರ್ದೇಶಕ ರಾಹುಲ್ ಸಾಂಕೃತ್ಯಾಯನ್ ಅವರ ಮೇಕಿಂಗ್, ಅಜಯ್–ಅತುಲ್ ಸಂಗೀತ ಹಾಗೂ ಹಿನ್ನೆಲೆ ಸಂಗೀತಕ್ಕೂ ಮೆಚ್ಚುಗೆ ವ್ಯಕ್ತವಾಗಿದೆ.

ಆದ್ರೆ ಮತ್ತೊಂದು ವರ್ಗದ ಪ್ರೇಕ್ಷಕರು ಸಿನಿಮಾದ ಚಿತ್ರಕಥೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಜೆಟ್ ದೊಡ್ಡದಿದೆ.. ಸೆಟ್‌ಗಳು ಅದ್ಧೂರಿಯಾಗಿವೆ.. ವಿಎಫ್‌ಎಕ್ಸ್ ಕಣ್ಣಿಗೆ ಹಬ್ಬದಂತಿದೆ.. ಆದ್ರೆ ಕಥೆಯಲ್ಲಿ ದಮ್ ಇಲ್ಲ ಅನ್ನೋದೇ ಕೆಲವರ ಕಂಪ್ಲೇಂಟ್!

ಸಾಮಾಜಿಕ ಜಾಲತಾಣದ ಬಳಕೆದಾರರೊಬ್ಬರು ಸಿನಿಮಾಕ್ಕೆ ಹತ್ತರಲ್ಲಿ ನಾಲ್ಕು ಅಂಕ ನೀಡಿ, ದುರ್ಬಲ ಚಿತ್ರಕಥೆಯಿಂದ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಮೂಡಿಬಂದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮತ್ತೊಬ್ಬ ನೆಟ್ಟಿಗರು, ಸಿನಿಮಾ ತಂಡದ ಶ್ರಮ ಮೆಚ್ಚುವಂತಿದ್ದರೂ ಕಥೆ ಹಳೆಯದಾಗಿ ಕಾಣುತ್ತದೆ ಎಂದು ಹೇಳಿದ್ದಾರೆ. ವಿಜಯ್ ದೇವರಕೊಂಡ ಪಾತ್ರಕ್ಕೆ ಸೂಕ್ತವಾಗಿ ಹೊಂದಿಕೊಂಡಿಲ್ಲ ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದಾರೆ. ಆದರೆ ರಶ್ಮಿಕಾ ಅಭಿನಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.

ಹಾಗಾದ್ರೆ ‘ರಣಬಾಲಿ’ ಸಿನಿಮಾ ಹಿಟ್ಟಾ? ಫ್ಲಾಪಾ?

ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಪಾಸಿಟಿವ್ ಮತ್ತು ನೆಗೆಟಿವ್ ಎರಡೂ ರೀತಿಯ ಪ್ರತಿಕ್ರಿಯೆಗಳು ಕೇಳಿಬರುತ್ತಿವೆ. ಕೆಲವರು ಸಿನಿಮಾ ಸೂಪರ್ ಹಿಟ್ ಆಗಲಿದೆ ಎನ್ನುತ್ತಿದ್ದರೆ, ಇನ್ನೂ ಕೆಲವರು ಸಾಧಾರಣ ಸಿನಿಮಾ ಎಂದು ಅಭಿಪ್ರಾಯಪಟ್ಟಿದ್ದಾರೆ.

ಆದರೆ ಸಿನಿಮಾದ ನಿಜವಾದ ಬಾಕ್ಸ್ ಆಫೀಸ್ ಭವಿಷ್ಯ ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ಒಟ್ಟಿನಲ್ಲಿ ವಿಜಯ್–ರಶ್ಮಿಕಾ ಜೋಡಿಯ ಕೆಮಿಸ್ಟ್ರಿ ಪ್ರೇಕ್ಷಕರ ಗಮನ ಸೆಳೆದಿದ್ದರೂ, ‘ರಣಬಾಲಿ’ ಚಿತ್ರದ ಕಥೆ ಮತ್ತು ಚಿತ್ರಕಥೆಯ ವಿಚಾರದಲ್ಲಿ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ಲೈವ್

NTV ಕನ್ನಡ 24×7 ಸುದ್ದಿ

ಪೂರ್ಣವಾಗಿ ವೀಕ್ಷಿಸಿ
ಬರಹ

ಮನರಂಜನಾ ವರದಿಗಾರರು (Entertainment & Cinema Reporter)

NTV ಕನ್ನಡ ಸಂಪಾದಕೀಯ ತಂಡ.