ಅಕ್ಷರ ಗಾತ್ರ

ರಿಲೀಸ್ʼಗೂ ಮುನ್ನವೇ ‘ರಾಮಾಯಣ’ ಅಬ್ಬರ! 1.26 ಲಕ್ಷ ಟಿಕೆಟ್ ಮಾರಾಟ, ಒಂದು ಟಿಕೆಟ್ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!

ರಾಮಾಯಣ ಚಿತ್ರದ ಪೋಸ್ಟರ್‌ನಲ್ಲಿ ರಾವಣನಾಗಿ Yash, ಶ್ರೀರಾಮನಾಗಿ Ranbir Kapoor ಮತ್ತು ಸೀತೆಯಾಗಿ Sai Pallavi

ಬೆಂಗಳೂರು” ಒಂದು ಸಿನಿಮಾ ಟಿಕೆಟ್‌ಗೆ ಬರೋಬ್ಬರಿ 2,770 ರೂಪಾಯಿ! ಹೌದು.. ರಿಲೀಸ್‌ಗೂ ಮುನ್ನವೇ ರಣಬೀರ್ ಕಪೂರ್ ಅಭಿನಯದ ‘ರಾಮಾಯಣ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸಖತ್ ಸದ್ದು ಮಾಡುತ್ತಿದೆ. ಅಡ್ವಾನ್ಸ್ ಬುಕ್ಕಿಂಗ್‌ನಲ್ಲಿ ಈಗಾಗಲೇ 7 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಆಗಿದೆ ಎಂಬ ವರದಿ ಹೊರಬಿದ್ದಿದೆ. ಹಾಗಾದ್ರೆ ಎಷ್ಟು ಟಿಕೆಟ್ ಮಾರಾಟವಾಗಿವೆ? ಯಾವ ರಾಜ್ಯದಲ್ಲಿ ಅತಿ ಹೆಚ್ಚು ಬುಕ್ಕಿಂಗ್ ಆಗಿದೆ? ಇಲ್ಲಿದೆ ಕಂಪ್ಲೀಟ್ ಬಾಕ್ಸ್ ಆಫೀಸ್ ರಿಪೋರ್ಟ್!

ಬಾಲಿವುಡ್ ನಟ ರಣಬೀರ್ ಕಪೂರ್, ನ್ಯಾಚುರಲ್ ಬ್ಯೂಟಿ ಸಾಯಿ ಪಲ್ಲವಿ ಹಾಗೂ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾ ಈಗ ಭಾರೀ ಚರ್ಚೆಯಲ್ಲಿದೆ. ನಿತೇಶ್ ತಿವಾರಿ ನಿರ್ದೇಶನದ ಈ ಬಿಗ್ ಬಜೆಟ್ ಸಿನಿಮಾ ನವೆಂಬರ್ 5ರಂದು ತೆರೆಗೆ ಬರಲಿದೆ ಎಂದು ಹೇಳಲಾಗುತ್ತಿದೆ. ಆದರೆ ಸಿನಿಮಾ ರಿಲೀಸ್‌ಗೂ ಮೊದಲೇ ಅಡ್ವಾನ್ಸ್ ಬುಕ್ಕಿಂಗ್ ಲೆಕ್ಕಾಚಾರಗಳು ಗಮನ ಸೆಳೆಯುತ್ತಿವೆ.

ವರದಿಯಾಗಿರುವ ಅಂಕಿ-ಅಂಶಗಳ ಪ್ರಕಾರ, ಅಕ್ಟೋಬರ್ 22ರ ಬೆಳಗ್ಗೆ 10 ಗಂಟೆಯವರೆಗೆ ದೇಶಾದ್ಯಂತ 3,707 ಶೋಗಳಿಗೆ ಸುಮಾರು 1 ಲಕ್ಷದ 26 ಸಾವಿರ ಟಿಕೆಟ್‌ಗಳು ಮಾರಾಟವಾಗಿವೆ.

ಬ್ಲಾಕ್ ಮಾಡಲಾದ ಸೀಟುಗಳನ್ನು ಸೇರಿಸಿ ಒಟ್ಟು 7 ಕೋಟಿ 10 ಲಕ್ಷ ರೂಪಾಯಿ ಗ್ರಾಸ್ ಬುಕ್ಕಿಂಗ್ ದಾಖಲಾಗಿದೆ ಎನ್ನಲಾಗಿದೆ. ಬ್ಲಾಕ್ ಮಾಡಿದ ಸೀಟುಗಳನ್ನು ಹೊರತುಪಡಿಸಿದರೆ ಈ ಮೊತ್ತ 5 ಕೋಟಿ 17 ಲಕ್ಷ ರೂಪಾಯಿ ಎಂದು ವರದಿ ಹೇಳಿದೆ. ಇನ್ನು 8 ಶೋಗಳು ಹೌಸ್‌ಫುಲ್ ಆಗಿದ್ದು, ಒಟ್ಟಾರೆ ಶೇಕಡಾ 15ರಷ್ಟು ಆಕ್ಯುಪೆನ್ಸಿ ದಾಖಲಾಗಿದೆ ಎನ್ನಲಾಗಿದೆ.

ರಾಜ್ಯವಾರು ಬುಕ್ಕಿಂಗ್ ಲೆಕ್ಕಾಚಾರದಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. ಮಹಾರಾಷ್ಟ್ರದಿಂದ 1 ಕೋಟಿ 93 ಲಕ್ಷ ರೂಪಾಯಿ, ದೆಹಲಿಯಿಂದ 1 ಕೋಟಿ 78 ಲಕ್ಷ ರೂಪಾಯಿ ಹಾಗೂ ಗುಜರಾತ್‌ನಿಂದ ಸುಮಾರು 50 ಲಕ್ಷ ರೂಪಾಯಿ ಕಲೆಕ್ಷನ್ ಆಗಿದೆ ಎಂದು ಹೇಳಲಾಗಿದೆ.

ಇನ್ನು ತೆಲಂಗಾಣದಲ್ಲೂ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸಂಜೆ ಮತ್ತು ರಾತ್ರಿ ಶೋಗಳಿಗೆ ಹೆಚ್ಚಿನ ಬೇಡಿಕೆ ಕಂಡುಬಂದಿದೆ ಎನ್ನಲಾಗಿದೆ.

ಇದೆಲ್ಲಕ್ಕಿಂತ ಅಚ್ಚರಿ ಮೂಡಿಸಿರುವುದು ಸಿನಿಮಾದ ಪ್ರೀಮಿಯಂ ಟಿಕೆಟ್ ದರ! ಮುಂಬೈನ ಫೀನಿಕ್ಸ್ ಪಲ್ಲಾಡಿಯಂನ PVR ICONನಲ್ಲಿ ಆಯ್ದ ಐಮ್ಯಾಕ್ಸ್ 3D ರಿಕ್ಲೈನರ್ ಸೀಟುಗಳ ಟಿಕೆಟ್ ಬೆಲೆ ಬರೋಬ್ಬರಿ 2,770 ರೂಪಾಯಿ ಎಂದು ವರದಿಯಾಗಿದೆ. ಒಂದು ಸಿನಿಮಾ ನೋಡಲು ಇಷ್ಟೊಂದು ಹಣ ಖರ್ಚು ಮಾಡಬೇಕಾ ಎಂಬ ಚರ್ಚೆಯೂ ಶುರುವಾಗಿದೆ.

ವರದಿಗಳ ಪ್ರಕಾರ, ‘ಟಾಕ್ಸಿಕ್’, ‘ಧುರಂಧರ್ 2’ ಹಾಗೂ ‘ಜೈಲರ್ 2’ ಸಿನಿಮಾಗಳ ಅಂತಿಮ ಅಡ್ವಾನ್ಸ್ ಬುಕ್ಕಿಂಗ್ ಕಲೆಕ್ಷನ್‌ಗಳ ಜೊತೆ ‘ರಾಮಾಯಣ’ದ ಆರಂಭಿಕ ಬುಕ್ಕಿಂಗ್ ಹೋಲಿಸಲಾಗುತ್ತಿದೆ. ಆದರೆ ‘ರಾಮಾಯಣ’ದ ಬುಕ್ಕಿಂಗ್ ಇನ್ನೂ ಮುಂದುವರಿದಿರುವುದರಿಂದ ಅಂತಿಮ ಕಲೆಕ್ಷನ್ ಎಷ್ಟಾಗಲಿದೆ ಎಂಬುದನ್ನು ಕಾದುನೋಡಬೇಕಿದೆ.

ಒಟ್ಟಿನಲ್ಲಿ ರಣಬೀರ್ ಕಪೂರ್, ಯಶ್ ಹಾಗೂ ಸಾಯಿ ಪಲ್ಲವಿ ಕಾಂಬಿನೇಷನ್‌ನ ‘ರಾಮಾಯಣ’ ಸಿನಿಮಾ ಮೇಲೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿದೆ. ಈಗ ಹರಿದಾಡುತ್ತಿರುವ ಬುಕ್ಕಿಂಗ್ ಲೆಕ್ಕಾಚಾರಗಳು ನಿಜವಾದರೆ, ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಓಪನಿಂಗ್ ಪಡೆಯುವ ಸಾಧ್ಯತೆ ಇದೆ.

ಲೈವ್

NTV ಕನ್ನಡ 24×7 ಸುದ್ದಿ

ಪೂರ್ಣವಾಗಿ ವೀಕ್ಷಿಸಿ
ಬರಹ

ಮನರಂಜನಾ ವರದಿಗಾರರು (Entertainment & Cinema Reporter)

NTV ಕನ್ನಡ ಸಂಪಾದಕೀಯ ತಂಡ.