ರಾಕಿಂಗ್ ಸ್ಟಾರ್ ಯಶ್ ಹಾಗೂ ಬಾಲಿವುಡ್ ಸ್ಟಾರ್ ರಣಬೀರ್ ಕಪೂರ್ ಅಭಿಮಾನಿಗಳಿಗೆ ‘ರಾಮಾಯಣ’ ಚಿತ್ರತಂಡದಿಂದ ಬಿಗ್ ಅಪ್ಡೇಟ್ ಸಿಗುವ ನಿರೀಕ್ಷೆ ಇದೆ!
ಬರೋಬ್ಬರಿ ₹4,000 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿದೆ ಎನ್ನಲಾದ ಈ ಮೆಗಾ ಸಿನಿಮಾದ ಎರಡನೇ ಭಾಗದ ಬಿಡುಗಡೆ ಮುಂದೂಡಿಕೆಯಾಗಲಿದೆ ಎಂಬ ಸುದ್ದಿ ಇದೀಗ ಸಿನಿ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ಹೌದು.. ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಸಿನಿಮಾದ ಮೊದಲ ಭಾಗ 2026ರ ದೀಪಾವಳಿಗೆ ತೆರೆಗೆ ಬರಲು ಸಜ್ಜಾಗುತ್ತಿದೆ. ಆದರೆ ಎರಡನೇ ಭಾಗಕ್ಕಾಗಿ ಅಭಿಮಾನಿಗಳು ಇನ್ನಷ್ಟು ಸಮಯ ಕಾಯಬೇಕಾಗಬಹುದು.
ಏಕೆಂದರೆ ಚಿತ್ರದ ಎರಡನೇ ಭಾಗದಲ್ಲಿ ಭರ್ಜರಿ ಯುದ್ಧದ ದೃಶ್ಯಗಳು, ಅದ್ಧೂರಿ ಸೆಟ್‌ಗಳು ಹಾಗೂ ವಿಶ್ವದರ್ಜೆಯ ವಿಎಫ್‌ಎಕ್ಸ್ ಇರಲಿವೆ. ಇವುಗಳನ್ನು ಅತ್ಯುತ್ತಮ ಗುಣಮಟ್ಟದಲ್ಲಿ ಸಿದ್ಧಪಡಿಸಲು ಚಿತ್ರತಂಡಕ್ಕೆ ಹೆಚ್ಚಿನ ಸಮಯ ಬೇಕಾಗಿದೆ ಎನ್ನಲಾಗಿದೆ.

ಹೀಗಾಗಿ 2027ರ ದೀಪಾವಳಿಗೆ ಬಿಡುಗಡೆಯಾಗಬೇಕಿದ್ದ ‘ರಾಮಾಯಣ 2’ ಚಿತ್ರವನ್ನು 2028ರ ದೀಪಾವಳಿಗೆ ಮುಂದೂಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಆದರೆ ಈ ಬಗ್ಗೆ ನಿರ್ಮಾಪಕರಿಂದ ಅಧಿಕೃತ ಘೋಷಣೆ ಹೊರಬಿದ್ದಿಲ್ಲ. ಒಟ್ಟಿನಲ್ಲಿ ರಾಮನಾಗಿ ರಣಬೀರ್ ಕಪೂರ್ ಹಾಗೂ ರಾವಣನಾಗಿ ರಾಕಿಂಗ್ ಸ್ಟಾರ್ ಯಶ್ ಅವರನ್ನು ಬೆಳ್ಳಿತೆರೆಯಲ್ಲಿ ನೋಡಲು ಕಾಯುತ್ತಿರುವ ಅಭಿಮಾನಿಗಳಲ್ಲಿ ಈ ಸುದ್ದಿ ಕುತೂಹಲ ಮೂಡಿಸಿದೆ.