ಅಕ್ಷರ ಗಾತ್ರ

ಆಯುಧ ಪೂಜೆ ಸಂಭ್ರಮ: ಬೆಂಗಳೂರಿನ ಕೆ.ಆರ್. ಮಾರುಕಟ್ಟೆಯಲ್ಲಿ ಹೂವು, ಹಣ್ಣುಗಳ ಬೆಲೆ ದುಬಾರಿ!

ಆಯುಧ ಪೂಜೆ ಹಿನ್ನೆಲೆಯಲ್ಲಿ Bengaluru KR Market ನಲ್ಲಿ ಹೂವು ಖರೀದಿಸುತ್ತಿರುವ ಜನರು

ಬೆಂಗಳೂರು: ಆಯುಧ ಪೂಜೆ ಹಿನ್ನೆಲೆಯಲ್ಲಿ ಬೆಂಗಳೂರಿನ ಕೆ.ಆರ್. ಮಾರುಕಟ್ಟೆಯಲ್ಲಿ ಹೂವು, ಹಣ್ಣುಗಳ ಬೆಲೆ ಗಗನಕ್ಕೇರಿದೆ.

ಹಬ್ಬದ ಖರೀದಿಗಾಗಿ ಮಾರುಕಟ್ಟೆಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ಮಾರುಕಟ್ಟೆ ರಸ್ತೆಗಳಲ್ಲಿ ವಾಹನ ದಟ್ಟಣೆ ಉಂಟಾಗಿದೆ. ಮಲ್ಲಿಗೆ ಮತ್ತು ಕನಕಾಂಬರ ಹೂಗಳ ಬೆಲೆ ಕೆಜಿಗೆ 1,500ರಿಂದ 1,800 ರೂಪಾಯಿವರೆಗೆ ತಲುಪಿದೆ.

ಹಬ್ಬದ ಹಿನ್ನೆಲೆಯಲ್ಲಿ ಮನೆ, ವಾಹನ ಹಾಗೂ ಉಪಕರಣಗಳ ಪೂಜೆಗೆ ಅಗತ್ಯವಿರುವ ಹೂವು, ಹಣ್ಣು ಮತ್ತು ಪೂಜಾ ಸಾಮಗ್ರಿಗಳನ್ನು ಖರೀದಿಸಲು ಜನರು ಮಾರುಕಟ್ಟೆಗೆ ಮುಗಿಬಿದ್ದಿದ್ದಾರೆ. ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಹಲವು ವಸ್ತುಗಳ ಬೆಲೆಯೂ ಏರಿಕೆಯಾಗಿದೆ.

ಹೂವುಗಳ ಬೆಲೆ ಹೀಗಿದೆ

  • ದುಂಡುಮಲ್ಲಿಗೆ: ಕೆಜಿಗೆ ₹1,400–1,600
  • ಬಟನ್ ರೋಸ್: ಕೆಜಿಗೆ ₹500–600
  • ಸೇವಂತಿಗೆ: ಕೆಜಿಗೆ ₹250–300
  • ಕನಕಾಂಬರ: ಕೆಜಿಗೆ ₹1,500–1,800
  • ಚೆಂಡುಹೂವು: ಕೆಜಿಗೆ ₹60–70

ಹಣ್ಣು ಮತ್ತು ಪೂಜಾ ಸಾಮಗ್ರಿಗಳ ದರ

  • ಸೇಬು: ಕೆಜಿಗೆ ₹180–250
  • ಕಿತ್ತಳೆ/ಮೊಸಂಬಿ: ಕೆಜಿಗೆ ₹100–150
  • ದಾಳಿಂಬೆ: ಕೆಜಿಗೆ ₹150–180
  • ಏಲಕ್ಕಿ ಬಾಳೆಹಣ್ಣು: ಕೆಜಿಗೆ ₹100–120
  • ಬೂದುಗುಂಬಳಕಾಯಿ: ಕೆಜಿಗೆ ₹25–30
  • ದೊಡ್ಡ ಬಾಳೆಕಂಬ: ₹150–200
  • ನಿಂಬೆಹಣ್ಣು: ಒಂದಕ್ಕೆ ₹8–10

ಟ್ರಾಫಿಕ್ ನಿಯಂತ್ರಣಕ್ಕೆ ಪೊಲೀಸರ ಕ್ರಮ

ಕೆ.ಆರ್. ಮಾರುಕಟ್ಟೆ ಸುತ್ತಮುತ್ತ ವಾಹನ ದಟ್ಟಣೆ ಹೆಚ್ಚಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಸಂಚಾರ ಪೊಲೀಸರು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ. ಪ್ರತಿ ವರ್ಷ ಹಬ್ಬದ ಸಂದರ್ಭದಲ್ಲಿ ಫ್ಲೈಓವರ್ ಮೇಲೆ ವಾಹನಗಳನ್ನು ನಿಲುಗಡೆ ಮಾಡುವುದರಿಂದ ಸಂಚಾರಕ್ಕೆ ತೊಂದರೆಯಾಗುತ್ತಿತ್ತು. ಈ ಬಾರಿ ಫ್ಲೈಓವರ್ ಮೇಲೆ ವಾಹನ ನಿಲುಗಡೆಗೆ ಪೊಲೀಸರು ಅವಕಾಶ ನೀಡಿಲ್ಲ.

ಇದಲ್ಲದೆ, ಜನರ ಓಡಾಟ ಮತ್ತು ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದ್ದ ರಸ್ತೆ ಬದಿಯ ವ್ಯಾಪಾರವನ್ನು ನಿಯಂತ್ರಿಸಲು ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. ಮಾರುಕಟ್ಟೆಯಿಂದ ಅವೆನ್ಯೂ ರಸ್ತೆಯವರೆಗಿನ ಕೆಲವು ಭಾಗಗಳಲ್ಲಿ ರಸ್ತೆ ವ್ಯಾಪಾರವನ್ನು ಬಂದ್ ಮಾಡಲಾಗಿದೆ. ಹಬ್ಬದ ಖರೀದಿಗೆ ಬರುವ ಜನರು ಹಾಗೂ ವಾಹನ ಸವಾರರು ಸಂಚಾರ ನಿಯಮಗಳನ್ನು ಪಾಲಿಸುವಂತೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಲೈವ್

NTV ಕನ್ನಡ 24×7 ಸುದ್ದಿ

ಪೂರ್ಣವಾಗಿ ವೀಕ್ಷಿಸಿ
ಬರಹ

ಮೆಟ್ರೋ ಮತ್ತು ನಗರ ವರದಿಗಾರರು (City & Metro Reporter)

NTV ಕನ್ನಡ ಸಂಪಾದಕೀಯ ತಂಡ.