ಅಕ್ಷರ ಗಾತ್ರ

ವಿಮಾನ ನಿಲ್ದಾಣಗಳೇ ಡ್ರಗ್ಸ್ ಸಾಗಣೆಯ ಅಡ್ಡೆ? 3 ನಗರಗಳಲ್ಲಿ ಡಿಆರ್‌ಐ ದಾಳಿ, 9 ಕೆಜಿಗೂ ಅಧಿಕ ಮಾದಕವಸ್ತು ಸೀಜ್

DRI ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ವಶಪಡಿಸಿಕೊಂಡ ಮಾದಕವಸ್ತು ಸೀಜ್ ಪೊಟ್ಟಣಗಳು

ಬೆಂಗಳೂರು: ದೇಶದ ಮೂರು ಪ್ರಮುಖ ನಗರಗಳಲ್ಲಿ ಮಾದಕವಸ್ತು ಸಾಗಣೆ ಜಾಲಕ್ಕೆ ಡಿಆರ್‌ಐ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ.

ಬೆಂಗಳೂರು, ದೆಹಲಿ ಮತ್ತು ನಾಗಪುರದಲ್ಲಿ ನಡೆದ ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ 9 ಕೆಜಿಗೂ ಅಧಿಕ ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 5 ಕೆಜಿ ಮಾದಕವಸ್ತುಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ದೆಹಲಿಯಿಂದ ಬೆಂಗಳೂರಿಗೆ ಬರುತ್ತಿದ್ದ ಪ್ರಯಾಣಿಕರೊಬ್ಬರ ಮೇಲೆ ನಿಗಾ ಇರಿಸಿ ಈ ಕಾರ್ಯಾಚರಣೆ ನಡೆಸಲಾಗಿದೆ.

ಇತ್ತ, ದೆಹಲಿ ವಿಮಾನ ನಿಲ್ದಾಣದಲ್ಲಿ 3 ಕೆಜಿ ಕೊಕೇನ್ ಪತ್ತೆಯಾಗಿದ್ದರೆ, ನಾಗಪುರದಲ್ಲಿ 1.97 ಕೆಜಿ ಆಂಫೆಟಮೈನ್ ವಶಕ್ಕೆ ಪಡೆಯಲಾಗಿದೆ.

ಮೂರು ನಗರಗಳಲ್ಲಿ ಪತ್ತೆಯಾದ ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ. ದೇಶದಲ್ಲಿ ಮಾದಕವಸ್ತುಗಳ ಅಕ್ರಮ ಸಾಗಾಟಕ್ಕೆ ಕಡಿವಾಣ ಹಾಕಲು ಡಿಆರ್‌ಐ ತನ್ನ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ.

ಲೈವ್

NTV ಕನ್ನಡ 24×7 ಸುದ್ದಿ

ಪೂರ್ಣವಾಗಿ ವೀಕ್ಷಿಸಿ
ಬರಹ

ಮೆಟ್ರೋ ಮತ್ತು ನಗರ ವರದಿಗಾರರು (City & Metro Reporter)

NTV ಕನ್ನಡ ಸಂಪಾದಕೀಯ ತಂಡ.