ಅಕ್ಷರ ಗಾತ್ರ

ದೆಹಲಿಯ ಏಮ್ಸ್‌ನಲ್ಲಿ ಕೊನೆಯುಸಿರೆಳೆದ ರಾಜ್ಯಸಭಾ ಸಂಸದ ರಾಮರಾವ್ ವಡ್ಕುಟೆ!

ಸಾಂಪ್ರದಾಯಿಕ ಪೇಟ ಧರಿಸಿ ಕೈಮುಗಿಯುತ್ತಿರುವ ಬಿಜೆಪಿ ನಾಯಕ ರಾಮರಾವ್ ವಡ್ಕುಟೆ

ನವದೆಹಲಿ: ಕೇವಲ ಎಂಟು ತಿಂಗಳ ಹಿಂದಷ್ಟೇ ರಾಜ್ಯಸಭೆ ಪ್ರವೇಶಿಸಿದ್ದ ಬಿಜೆಪಿ ನಾಯಕನ ಬದುಕಿಗೆ ಹೃದಯಾಘಾತ ದಿಢೀರ್ ತೆರೆ ಎಳೆದಿದೆ.

ಬಿಜೆಪಿ ರಾಜ್ಯಸಭಾ ಸಂಸದ ರಾಮರಾವ್ ವಡ್ಕುಟೆ ನಿಧನರಾಗಿದ್ದು, ರಾಜಕೀಯ ವಲಯದಲ್ಲಿ ಆಘಾತ ಮೂಡಿಸಿದೆ.

ತಡರಾತ್ರಿ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ವೈದ್ಯರ ಚಿಕಿತ್ಸೆಯ ನಡುವೆಯೇ ಅವರು ಕೊನೆಯುಸಿರೆಳೆದಿದ್ದಾರೆ.

ಮಹಾರಾಷ್ಟ್ರ ರಾಜಕಾರಣದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ರಾಮರಾವ್ ವಡ್ಕುಟೆ ಅವರ ರಾಜಕೀಯ ಪಯಣ ಹಲವು ಹಂತಗಳನ್ನು ಒಳಗೊಂಡಿತ್ತು. ಆರಂಭದಲ್ಲಿ ಮೇಕೆ ಮತ್ತು ಕುರಿ ಸಾಕಣೆದಾರರ ಒಕ್ಕೂಟವಾದ ಶೆಲಿ-ಮೆಂಧಿ ಮಹಾಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಬಳಿಕ ಎನ್‌ಸಿಪಿ ಜೊತೆ ಗುರುತಿಸಿಕೊಂಡು ಮಹಾರಾಷ್ಟ್ರ ವಿಧಾನ ಪರಿಷತ್ ಸದಸ್ಯರಾಗಿದ್ದರು.

2019ರಲ್ಲಿ ಎನ್‌ಸಿಪಿಗೆ ವಿದಾಯ ಹೇಳಿ ಬಿಜೆಪಿ ಸೇರಿದ್ದ ಅವರು, 2021ರಲ್ಲಿ ಹಿಂಗೋಲಿ ಜಿಲ್ಲಾ ಬಿಜೆಪಿ ಅಧ್ಯಕ್ಷರ ಜವಾಬ್ದಾರಿ ವಹಿಸಿಕೊಂಡಿದ್ದರು. ಬಳಿಕ ಹಿಂಗೋಲಿ ಲೋಕಸಭಾ ಕ್ಷೇತ್ರದ ಚುನಾವಣಾ ಮುಖ್ಯಸ್ಥ ಹಾಗೂ ಉಸ್ತುವಾರಿಯಾಗಿಯೂ ಕೆಲಸ ಮಾಡಿದ್ದರು.

ವಿಶೇಷವಾಗಿ ಮಹಾರಾಷ್ಟ್ರದ ಧಾಂಗರ್ ಸಮುದಾಯದ ಪ್ರಮುಖ ನಾಯಕರಾಗಿ ಗುರುತಿಸಿಕೊಂಡಿದ್ದ ವಡ್ಕುಟೆ, ಅನುಭವಿ ಹಾಗೂ ವಾಕ್ಚಾತುರ್ಯ ಹೊಂದಿದ ರಾಜಕಾರಣಿ ಎಂಬ ಹೆಸರನ್ನೂ ಗಳಿಸಿದ್ದರು. ಅವರ ರಾಜಕೀಯ ಸಾಧನೆ ಮತ್ತು ಪಕ್ಷ ಸಂಘಟನೆಯ ಕಾರ್ಯವನ್ನು ಪರಿಗಣಿಸಿ ಬಿಜೆಪಿ ಸುಮಾರು ಎಂಟು ತಿಂಗಳ ಹಿಂದೆ ರಾಜ್ಯಸಭೆಗೆ ನಾಮನಿರ್ದೇಶನ ಮಾಡಿತ್ತು. ಇದೀಗ ಅವರ ಅಕಾಲಿಕ ನಿಧನ ರಾಜಕೀಯ ವಲಯಕ್ಕೆ ಆಘಾತ ತಂದಿದೆ.

ಲೈವ್

NTV ಕನ್ನಡ 24×7 ಸುದ್ದಿ

ಪೂರ್ಣವಾಗಿ ವೀಕ್ಷಿಸಿ
ಬರಹ

ಸಂಪಾದಕರು (Editor)

ಕರ್ನಾಟಕದ ರಾಜಕೀಯ, ಆಡಳಿತ, ವಿಧಾನಸೌಧ ಹಾಗೂ ಚುನಾವಣಾ ವಿದ್ಯಮಾನಗಳನ್ನು 10+ ವರ್ಷಗಳಿಂದ ವರದಿ ಮಾಡುತ್ತಿರುವ ಹಿರಿಯ ಪತ್ರಕರ್ತರು. Senior Political Correspondent covering Karnataka state politics, governance, and policy with over a decade of journalistic experience.