ಅಕ್ಷರ ಗಾತ್ರ

ಕಬ್ಬು ಬೆಳೆಗಾರರಿಗೆ ಸಿಹಿ ಸುದ್ದಿ: ಪ್ರತಿ ಟನ್‌ʼಗೆ ₹4,200 ದರ ಘೋಷಿಸಿದ ವೆಂಕಟೇಶ್ವರ ಸಕ್ಕರೆ ಕಾರ್ಖಾನೆ!

ಹೊಲದಲ್ಲಿ ಕೊಯ್ಲು ಮಾಡಿದ ಕಬ್ಬಿನ ಕಂತೆಗಳನ್ನು ತಲೆಯ ಮೇಲೆ ಹೊತ್ತು ಸಾಗಿಸುತ್ತಿರುವ ರೈತ ಕಾರ್ಮಿಕರು.

ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಬೇಡಕಿಹಾಳದಲ್ಲಿರುವ ವೆಂಕಟೇಶ್ವರ ಸಕ್ಕರೆ ಕಾರ್ಖಾನೆ ಪ್ರಸಕ್ತ ಹಂಗಾಮಿನಲ್ಲಿ ಕಬ್ಬು ಪೂರೈಸುವ ರೈತರಿಗೆ ಪ್ರತಿ ಟನ್‌ಗೆ ಗರಿಷ್ಠ 4,200 ರೂಪಾಯಿ ದರ ನೀಡಲು ನಿರ್ಧರಿಸಿದೆ. ಈ ಮೂಲಕ ಕರ್ನಾಟಕದಲ್ಲೇ ಕಬ್ಬಿಗೆ ಅತ್ಯಧಿಕ ದರ ಘೋಷಿಸಿದ ಕಾರ್ಖಾನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಕಾರ್ಖಾನೆಯ ಆಡಳಿತ ಮಂಡಳಿಯು ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಗಳು ನೀಡುತ್ತಿರುವ ದರದ ಮಾದರಿಯಲ್ಲೇ ಕಬ್ಬಿನ ಬೆಲೆ ನಿಗದಿಪಡಿಸಲು ತೀರ್ಮಾನಿಸಿದೆ. ಈ ಕುರಿತು ಕಾರ್ಖಾನೆಯ ಮಂಡಳಿ ಪತ್ರಿಕಾ ಪ್ರಕಟಣೆ ಮೂಲಕ ಅಧಿಕೃತ ಮಾಹಿತಿ ನೀಡಿದೆ.

ಮೂರು ಕಂತುಗಳಲ್ಲಿ ಕಬ್ಬಿನ ಹಣ ಪಾವತಿ

ಕಾರ್ಖಾನೆಯು ಕಬ್ಬು ಪೂರೈಕೆದಾರರಿಗೆ ಮೂರು ಕಂತುಗಳಲ್ಲಿ ಹಣ ಪಾವತಿಸಲು ನಿರ್ಧರಿಸಿದೆ.

  • ಮೊದಲ ಕಂತು: ಪ್ರತಿ ಟನ್‌ಗೆ 3,800 ರೂಪಾಯಿ.

  • ಎರಡನೇ ಕಂತು: ಪ್ರತಿ ಟನ್‌ಗೆ ಹೆಚ್ಚುವರಿಯಾಗಿ 100 ರೂಪಾಯಿ.

  • ಮೂರನೇ ಕಂತು: ಸಕ್ಕರೆ ದರ ಪ್ರತಿ ಕೆಜಿಗೆ 50 ರೂಪಾಯಿಗಿಂತ ಹೆಚ್ಚಾದರೆ ಹೆಚ್ಚುವರಿಯಾಗಿ 300 ರೂಪಾಯಿ.

ಈ ಮೂರು ಕಂತುಗಳ ಮೂಲಕ ಷರತ್ತು ಪೂರೈಸಿದಲ್ಲಿ ಪ್ರತಿ ಟನ್ ಕಬ್ಬಿಗೆ ಒಟ್ಟು 4,200 ರೂಪಾಯಿ ದೊರೆಯಲಿದೆ.

ರೈತರ ಹಿತದೃಷ್ಟಿಯಿಂದ ನಿರ್ಧಾರ

ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಗಳ ದರಕ್ಕೆ ಪೈಪೋಟಿ ನೀಡುವ ಜತೆಗೆ ರೈತರ ಹಿತ ಕಾಪಾಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.

ಕರ್ನಾಟಕದಲ್ಲೇ ಅತ್ಯಧಿಕ ಕಬ್ಬಿನ ದರ ಘೋಷಿಸಿರುವುದರಿಂದ ಬೇಡಕಿಹಾಳ ಹಾಗೂ ಸುತ್ತಮುತ್ತಲಿನ ಭಾಗಗಳ ಕಬ್ಬು ಬೆಳೆಗಾರರಲ್ಲಿ ಸಂತಸ ಮೂಡಿದೆ.

ಲೈವ್

NTV ಕನ್ನಡ 24×7 ಸುದ್ದಿ

ಪೂರ್ಣವಾಗಿ ವೀಕ್ಷಿಸಿ
ಬರಹ

ಸಂಪಾದಕರು (Editor)

ಕರ್ನಾಟಕದ ರಾಜಕೀಯ, ಆಡಳಿತ, ವಿಧಾನಸೌಧ ಹಾಗೂ ಚುನಾವಣಾ ವಿದ್ಯಮಾನಗಳನ್ನು 10+ ವರ್ಷಗಳಿಂದ ವರದಿ ಮಾಡುತ್ತಿರುವ ಹಿರಿಯ ಪತ್ರಕರ್ತರು. Senior Political Correspondent covering Karnataka state politics, governance, and policy with over a decade of journalistic experience.