ಬಿಗ್‌ಬಾಸ್ ಮನೆಯಲ್ಲಿ ಈ ವಾರ ಯುವರಾಣಿಯರ ಆಟ ಜೋರಾಗಿದೆ. ತಮ್ಮದೇ ಸೇನೆ ಮತ್ತು ಸೈನ್ಯವನ್ನು ಕಟ್ಟಿಕೊಳ್ಳಲು ಸ್ಪರ್ಧಿಗಳಿಗೆ ವಿವಿಧ ಟಾಸ್ಕ್‌ಗಳನ್ನು ನೀಡಲಾಗುತ್ತಿದೆ. ಈ ಟಾಸ್ಕ್‌ಗಳಲ್ಲಿ ಗೆದ್ದ ಯುವರಾಣಿಯ ತಂಡಕ್ಕೆ ನಾಮಿನೇಷನ್ ಮಾಡುವ ಅಧಿಕಾರ ಸಿಗುತ್ತಿದೆ. ಇದೀಗ ಈ ಅಧಿಕಾರದಿಂದ ಮನೆಯೊಳಗಿನ ಸಂಬಂಧಗಳಲ್ಲೂ ಬದಲಾವಣೆ ಕಾಣಿಸಿಕೊಂಡಿದೆ.
ಟಾಸ್ಕ್‌ನಲ್ಲಿ ಗೆಲುವು ಸಾಧಿಸಿದ ಯುವರಾಣಿಯ ತಂಡಕ್ಕೆ ನಾಮಿನೇಷನ್ ಅಧಿಕಾರ ಲಭಿಸುತ್ತದೆ. ಅದರಂತೆ ಓರ್ವ ಯುವರಾಣಿ ಮತ್ತೊಬ್ಬ ಯುವರಾಣಿಗೆ ತನ್ನ ತಂಡದ ಒಬ್ಬ ಸದಸ್ಯನನ್ನು ನಾಮಿನೇಟ್ ಮಾಡುವ ಅವಕಾಶ ನೀಡುತ್ತಾರೆ. ಆಯ್ಕೆಯಾದ ಸ್ಪರ್ಧಿ ನೇರವಾಗಿ ನಾಮಿನೇಷನ್‌ಗೆ ಒಳಗಾಗುತ್ತಾರೆ.
ಗಾನವಿ ಕೈಯಿಂದ ಮಂಜುನಾಥ್‌ಗೆ ನಾಮಿನೇಷನ್ ಶಾಕ್
ಈ ವಾರ ಸೌಂದರ್ಯ ಅವರ ತಂಡ ಟಾಸ್ಕ್‌ನಲ್ಲಿ ಗೆದ್ದು ನಾಮಿನೇಷನ್ ಅಧಿಕಾರ ಪಡೆದುಕೊಂಡಿದೆ. ಅದರಂತೆ ಸೌಂದರ್ಯ ಅವರು ತಮ್ಮ ಪರವಾಗಿ ನಾಮಿನೇಷನ್ ಮಾಡುವ ಜವಾಬ್ದಾರಿಯನ್ನು ಯುವರಾಣಿ ಗಾನವಿಗೆ ನೀಡಿದ್ದಾರೆ. ಆಗ ಗಾನವಿ ತಮ್ಮದೇ ತಂಡದ ಸದಸ್ಯ ಮಂಜುನಾಥ್ ಅವರನ್ನು ನಾಮಿನೇಟ್ ಮಾಡಿದ್ದಾರೆ.

ಇಲ್ಲಿಯವರೆಗೆ ‘ಮಂಜ-ಮಂಜಿ’ ಎಂದೇ ಜೊತೆಯಾಗಿದ್ದ ಗಾನವಿ ಮತ್ತು ಮಂಜುನಾಥ್ ನಡುವೆ ಇದೀಗ ಅಂತರ ಮೂಡಿದಂತಾಗಿದೆ. ಗಾನವಿ ನಾಮಿನೇಟ್ ಮಾಡುತ್ತಿದ್ದಂತೆ ಮಂಜುನಾಥ್ ಅಚ್ಚರಿಗೊಂಡಿದ್ದಾರೆ.
ಒಂದೇ ಗೇಮ್‌ನಿಂದ ವ್ಯಕ್ತಿತ್ವ ನಿರ್ಧಾರವಾಗಲ್ಲ ಎಂದ ಮಂಜ
ನಾಮಿನೇಷನ್ ಬಳಿಕ ಪ್ರತಿಕ್ರಿಯಿಸಿದ ಮಂಜುನಾಥ್, “ಯಾವುದೇ ಒಂದು ಗೇಮ್‌ನಿಂದ ಪರ್ಸನಾಲಿಟಿ ಗೊತ್ತಾಗಲ್ಲ. ಒಂದೇ ಗೇಮ್‌ನಿಂದ ಟ್ರೋಫಿ ಎತ್ತಿಕೊಂಡು ಹೋಗೋಕೆ ಆಗಲ್ಲ. ಪರ್ಸನಾಲಿಟಿ ಅಂತ ಬಂದಾಗ ನಾನು ಸ್ಟ್ಯಾಂಡ್ ತೆಗೆದುಕೊಂಡಿದ್ದೀನಿ,” ಎಂದು ಹೇಳಿದ್ದಾರೆ.
ಬಿಗ್‌ಬಾಸ್ ಮನೆಯಲ್ಲಿ ಆಟದ ತಂತ್ರಗಳು ಮತ್ತು ನಾಮಿನೇಷನ್ ಪ್ರಕ್ರಿಯೆಯಿಂದ ಸಂಬಂಧಗಳು ಬದಲಾಗುವುದು ಸಾಮಾನ್ಯ. ಆದರೆ, ಗಾನವಿ ಅವರ ಈ ನಿರ್ಧಾರ ಮಂಜುನಾಥ್‌ಗೆ ಅಚ್ಚರಿ ಮೂಡಿಸಿದ್ದು, ಮುಂದಿನ ದಿನಗಳಲ್ಲಿ ಇವರಿಬ್ಬರ ನಡುವಿನ ಸಂಬಂಧ ಯಾವ ತಿರುವು ಪಡೆದುಕೊಳ್ಳಲಿದೆ ಎಂಬ ಕುತೂಹಲ ಮೂಡಿದೆ.